Title (Indic)ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ WorkMumgaaru male LanguageKannada Credits Role Artist Music Manomoorti Performer Sonu Nigam LyricsKannadaಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ನಿನ್ನ ಮುಗಿಲ ಸಾಲೇ ಧರೆಯ ಕೊರಳ ಪ್ರೇಮದಮಾಲೆ ಸುರಿವ ಒಲುಮೆಯ ಜಡಿಮಳೆಗೆ ಪ್ರೀತಿ ಮೂಡಿದೆ ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ ಒಲವು ಎಲ್ಲಿ ಕುಡಿ ಒಡೆಯುವುದೋ ತಿಳಿಯದಾಗಿದೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ... ಭುವಿ ಕೆನ್ನೆ ತುಂಬಾ ಮುಗಿಲು ಸುರಿದ ಮುತ್ತಿನ ಗುರುತು ನನ್ನ ಎದೆಯ ತುಂಬಾ ಅವಳು ಬಂದ ಹೆಜ್ಜೆಯ ಗುರುತು ಹೆಜ್ಜೆ ಗೆಜ್ಜೆಯಾ ಸವಿಸದ್ದು ಪ್ರೇಮನಾದವೋ.... ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು ಬರೆದು ಹೆಸರ ಕಾಮನಬಿಲ್ಲು ಏನು ಮೋಡಿಯೋ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ... ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರೋ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ... ಒಲವ ಚಂದಮಾಮ ನಗುತ ಬಂದ ಮನದಂಗಳಕೆ ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ.. ಪ್ರಣಯದೂರಿನಲ್ಲಿ ಕಳೆದು ಹೋಗೊ ಸುಖವ ಇಂದು ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.... Englishmuṁgāru maḽĕye enu ninna hanigaḽa līlĕ ninna mugila sāle dharĕya kŏraḽa premadamālĕ suriva ŏlumĕya jaḍimaḽĕgĕ prīti mūḍidĕ yāva chippinalli yāva haniyu muttāguvudo ŏlavu ĕlli kuḍi ŏḍĕyuvudo tiḽiyadāgidĕ muṁgāru maḽĕye enu ninna hanigaḽa līlĕ... bhuvi kĕnnĕ tuṁbā mugilu surida muttina gurutu nanna ĕdĕya tuṁbā avaḽu baṁda hĕjjĕya gurutu hĕjjĕ gĕjjĕyā savisaddu premanādavo.... ĕdĕ mugilinalli raṁgu chĕlli niṁtaḽu avaḽu barĕdu hĕsara kāmanabillu enu moḍiyo muṁgāru maḽĕye enu ninna hanigaḽa līlĕ... yāva hanigaḽiṁda yāva nĕlavu hasirāguvudo yāra sparśhadiṁda yāra manavu hasiyāguvudo yāra usiralyāra hĕsaro yāru barĕdaro yāva prīti hūvu yāra hṛdayadallaraḽuvudo yāra prema pūjĕgĕ muḍipo yāru ballaro muṁgāru maḽĕye enu ninna hanigaḽa līlĕ... ŏlava chaṁdamāma naguta baṁda manadaṁgaḽakĕ prīti bĕḽakinalli hṛdaya hŏraṭidĕ mĕravaṇigĕ avaḽa premadūrina kaḍĕgĕ prīti payaṇavo.. praṇayadūrinalli kaḽĕdu hogŏ sukhava iṁdu dhanyanādĕ paḍĕdukŏṁḍu hŏsa janmavo muṁgāru maḽĕye enu ninna hanigaḽa līlĕ....